ವಿದ್ಯಾಗಮ ಯೋಜನೆಯ ಕಲಿಕಾ - ಕಾರ್ಯಕ್ರಮಗಳನ್ನು ಅನುಷ್ಠಾನ

ವಿದ್ಯಾಗಮ ಯೋಜನೆಯ ಕಲಿಕಾ - ಕಾರ್ಯಕ್ರಮಗಳನ್ನು ಅನುಷ್ಠಾನ

🤝🤝🤝🤝🤝🤝
ವಿದ್ಯಾಗಮ ಯೋಜನೆಯ ಕಲಿಕಾ-ಕಾರ್ಯಕ್ರಮದ  ಮುಖ್ಯಾಂಶಗಳು💐💐💐💐💐
# ಸರ್ಕಾರದ ಮಹತ್ವಾಕಾಂಕ್ಷಿ ವಿದ್ಯಾಗಮ ಎಂಬ ನಿರಂತರ ಕಲಿಕಾ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸುವುದು.
# ಇದರ ಉದ್ದೇಶ covid-19 ಹಿನ್ನೆಲೆಯಲ್ಲಿ ಶಾಲೆಗಳನ್ನು ಪ್ರಾರಂಭಿಸುವವರಿಗೂ ಮಕ್ಕಳನ್ನು ಶಾಲೆಯೊಂದಿಗೆ ನಿರಂತರ ಸಂಪರ್ಕದಲ್ಲಿಟ್ಟುಕೊಳ್ಳುವದಾಗಿದೆ.
# ಈಗಾಗಲೇ ಪ್ರತಿಶಾಲೆಯಿಂದ ಮಾರ್ಗದರ್ಶಿ ಶಿಕ್ಷಕರುಗಳ ಪಟ್ಟಿಯನ್ನು ಪಡೆದುಕೊಳ್ಳಲಾಗಿದೆ.
# ತಮ್ಮ ಶಾಲೆಗಳಲ್ಲಿರುವ ಮಕ್ಕಳನ್ನು ಅವರ ವಾಸಸ್ಥಳಕ್ಕನುಗುಣವಾಗಿ( habitations) 3 ಭಾಗಗಳಾಗಿಸಬೇಕು.
1 ) 1ರಿಂದ 5ನೆ ತರಗತಿ
2 ) 6ರಿಂದ 8ನೆ ತರಗತಿ
3 ) 8ರಿಂದ 10 ನೆ ತರಗತಿ ಎಂಬ ಕಾಲ್ಪನಿಕ ಕೊಠಡಿಗಳಾಗಿ
ಮಾಡಿಕೊಂಡು 20 ರಿಂದ 25 ಮಕ್ಕಳಿಗೊಬ್ಬ ಮಾರ್ಗದರ್ಶಿ ಶಿಕ್ಷಕರನ್ನು ನೇಮಕ ಮಾಡಬೇಕು.
# ಆಯಾಯ ಗುಂಪುಗಳಿಗೆ ನಿಗದಿಪಡಿಸಿದ ಮಾರ್ಗದರ್ಶಿ ಶಿಕ್ಷಕರಿಂದ ಈಗಾಗಲೇ ಇಲಾಖೆ ಒದಗಿಸಿರುವ ಪಠ್ಯಪುಸ್ತಕಗಳನ್ನು ಕಲಿಕಾ-ಸಾಮಗ್ರಿಗಳನ್ನಾಗಿಸಿಕೊಂಡು ಮಕ್ಕಳಿಗೆ ವಿವರವಾದ ಮಾರ್ಗದರ್ಶನ ನೀಡುವುದು.
# ಈಗಾಗಲೇ ಸರ್ಕಾರ 25ರಿಂದ 30% ರಷ್ಟು ಪಠ್ಯವನ್ನು ಕಡಿತಗೊಳಿಸಿರುವುದನ್ನು ಹೊರತುಪಡಿಸಿ ಉಳಿದ ಪಠ್ಯವಸ್ತುವನ್ನು ನಮ್ಮ ವಾರ್ಷಿಕ ಕಾರ್ಯಯೋಜನೆಯಂತೆ ಅನುಷ್ಠಾನಗೊಳಿಸಬೇಕು.
# ಮಕ್ಕಳು & ಶಿಕ್ಷಕರುಗಳ ಸಂಪರ್ಕ 3 ಕೊಠಡಿಗಳಲ್ಲಿ ವಿಂಗಡಣೆಯಾಗಿರುತ್ತದೆ.
1 )ಇಂಟಲಿಜೆಂಟ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಸಮೇತ phone,tab,computer & etc ಇವರುಗಳ ವಾಟ್ಸಪ್ ಗುಂಪುಗಳನ್ನು ಮಾಡಿಕೊಂಡು ಪ್ರತಿದಿನ ಬೆಳಿಗ್ಗೆ 9 ಗಂಟೆಯೊಳಗೆ / ಸಂಜೆ 5 ಗಂಟೆ ನಂತರ webx /zoom/Googlemeet ಬಳಸಿಕೊಂಡು online classes ಮಾಡಬೇಕು.
....
2 ) ಬ್ರಿಲಿಯಂಟ್ ಕಾಲ್ಪನಿಕ ಕೊಠಡಿ
ಇಲ್ಲಿ internet ಸಂಪರ್ಕವಿಲ್ಲದ phone ಗಳಿರುತ್ತವೆ.
ಇಂತಹ ಮಕ್ಕಳಿಗೆ SMS/voice messages ನಿಗದಿಪಡಿಸುದ ವೇಳೆಯಲ್ಲಿ ಮಕ್ಕಳಿಗೆ home assignment ಕೊಟ್ಟು feedback ಪಡೆದುಕೊಳ್ಳಬೇಕು.(call ಮಾಡಿಯಾದರು)
....
3 ) ಜೀನಿಯಸ್ ಕಾಲ್ಪನಿಕ ಕೊಠಡಿ.
ಇಲ್ಲಿ internet ಆಧರಿತ ಯಾವುದೇ ಸಾಧನಗಳಿರುವುದಿಲ್ಲ.
ಇಂತಹ ಮಕ್ಕಳನ್ನು ಗುಂಪುಗಳನ್ನಾಸಿಕೊಂಡು ಕನಿಷ್ಠ ವಾರಕ್ಕೊಂದು ಭಾರಿಯಾರು ಕಡ್ಡಾಯ ಬೇಟೆಮಾಡಿ ಮಕ್ಕಳಿಗೆ ಮುಂದಿನ ವಾರದಲ್ಲಿ ಮಾಡುವ home assignment ಕೊಟ್ಟು ಮಾರ್ಗದರ್ಶನ ನೀಡಬೇಕು.
# ಮಕ್ಕಳನ್ನು ಬೇಟೆಯಾಗುವಾಗ ಸರ್ಕಾರದ SOP ಯಂತೆ ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು.ಕಡ್ಡಾಯವಾಗಿ ಮುಖಗವಸನ್ನು(ಮಾಸ್ಕ)ಧರಿಸಿಕೊಳ್ಳಬೇಕು.
# ಪ್ರತಿ ಮಾರ್ಗದರ್ಶಿ ಶಿಕ್ಷಕರುಗಳಿಗೆ ವಾರಕ್ಕೊಮ್ಮೆ ಮಕ್ಕಳನ್ನು ಬೇಟೆಯಾಗುಂತೆ ವೇಳಾಪಟ್ಟಿ ಹಾಕಿಕೊಳ್ಳಬೇಕಾಗುತ್ತದೆ.
# ಯಾವುದೇ ಕಾರಣಕ್ಕೂ ಶಿಕ್ಷಕರು ಮಗುವನ್ನು /ಮಗು ಶಿಕ್ಷಕರನ್ನು ಏಕಾಂಗಿಯಾಗಿ ಬೇಟೆಯಾಗಬಾರದು.
#ಸಮುದಾಯ/ಹಳೆವಿದ್ಯಾರ್ಥಿಗಳು/ಸ್ವಯಂ ಸೇವಕರು/ SDMC ಪದಾಧಿಕಾರಿಗಳು/ಪಾಲಕರುಗಳನ್ನು ಈ ಕಾರ್ಯದಲ್ಲಿ ತೊಡಗಿಸಿಕೊಳ್ಳಬಹುದು.
# ಶಿಕ್ಷಕರುಗಳು ತಾವು ಕೈಗೊಂಡ ಪಾಠಪ್ರವಚನಗಳ ದಾಖಲೆಗಳನ್ನುಳಿಸಿಕೊಂಡಿರಬೇಕು.
# ಮಕ್ಕಳಿಗೆ ತಾವು ನೀಡಿದ home assignment/project/science models/etc ಗಳನ್ನು ಪರಿಶೀಲಿಸಿ ರೂಪಣಾತ್ಮಕ ಮೌಲ್ಯಮಾಪನಕ್ಕೆ ಅಂಕಗಳನ್ನು ನೀಡಿ ಅದನ್ನು SATS ನಲ್ಲಿ ದಾಖಲಿಸಬೇಕು.
🤝ಮುಖ್ಯಶಿಕ್ಷಕರ ಗಮನಕ್ಕೆ🤝
 ತಕ್ಷಣವೇ ಇದಕ್ಕೆ ಸಂಬಂಧಿಸಿದಂತೆ intelligent,brilliant& genius ಗುಂಪುಗಳನ್ನು ರಚಿಸಿ ಅವುಗಳ ಪಟ್ಟಿಯನ್ನು ನೀಡಬೇಕು.. 
ನಮ್ಮ  ಶಾಲೆಯ ಮತ್ತು ವಿದ್ಯಾರ್ಥಿಗಳ ಸರ್ವಾಂಗೀಣ ಪ್ರಗತಿಗಾಗಿ , ಶೈಕ್ಷಣಿಕ ಗುಣಮಟ್ಟ ಸುಧಾರಿಸಲು ನಾವು ನೀವು ಶ್ರಮ ಪಡೋಣ.

Comments